ನೀಳ ಕೇಶ ರಾಶಿ, ದಟ್ಟ ಕಪ್ಪು ಕೂದಲು, ಉದ್ದ ಜಡೆಯ ಹುಡುಗಿಯರನ್ನು ನೋಡಿದರೆ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ? ಹೆಣ್ಣಿನ ಸೌಂದರ್ಯದ ವಿಷಯ ಬಂದಾಗ ಆಕೆಯ ಕೂದಲು ಕೂಡ ಅದರಲ್ಲಿ ಬಹಳ ಮುಖ್ಯವಾಗುತ್ತದೆ. ಕೇವಲ ಹೆಣ್ಣುಮಕ್ಕಳಿಗೆ ಮಾತ್ರವಲ್ಲ, ಗಂಡುಮಕ್ಕಳಿಗೂ ಸಹ ತಲೆ ತುಂಬಾ ದಟ್ಟ ಕೂದಲಿದ್ದರೆ ಎಷ್ಟು ಚೆಂದ ಕಾಣುತ್ತಾರೆ, ಅಲ್ಲವೇ? ಇತ್ತೀಚಿನ ದಿನಗಳಲ್ಲಂತೂ ತಲೆ ತುಂಬಾ ಕೂದಲು ಇರುವವರನ್ನು ಕಂಡರೆ ಯಾರಿಗಾದರೂ ಹೊಟ್ಟೆಕಿಚ್ಚು ಬಂದೇ ಬರುತ್ತದೆ. ಇದಕ್ಕೆ ಸಾಕಷ್ಟು ಕಾರಣಗಳಿವೆ. ಒತ್ತಡದ ಜೀವನಶೈಲಿ ಮತ್ತು ಬದಲಾದ ಆಹಾರ ಪದ್ಧತಿಯಿಂದಾಗಿ ಚಿಕ್ಕ ವಯಸ್ಸಿನಲ್ಲೇ ಹೇರ್ ಫಾಲ್ ಮತ್ತು ಹೇರ್ ಥಿನ್ನಿಂಗ್ ಸಮಸ್ಯೆ ಬಹಳ ಜನರನ್ನು ಕಾಡುತ್ತಿದೆ. ಚಿಕ್ಕ ವಯಸ್ಸಿಗೇ ಬಿಳಿ ಕೂದಲು ಮತ್ತು ಹೇರ್ ಫಾಲ್ ಕಾಣಿಸಿಕೊಳ್ಳುವುದರಿಂದ ಒಬ್ಬ ವ್ಯಕ್ತಿಯ ಆತ್ಮವಿಶ್ವಾಸ ಕಡಿಮೆಯಾಗುತ್ತದೆ ಮತ್ತು ಕೀಳರಿಮೆ ಹುಟ್ಟುತ್ತದೆ.
ಇಂದು ತಂತ್ರಜ್ಞಾನ ಎಷ್ಟು ಮುಂದುವರೆದಿದೆ ಎಂದರೆ, ಹೇರ್ ಗ್ರೋಥ್ ಟ್ರೀಟ್ಮೆಂಟ್ಗಳು, ಹೇರ್ ಗ್ರೋಥ್ ಸೀರಂಗಳು, ಸಪ್ಲಿಮೆಂಟ್ಗಳು — ಒಂದೇ ಎರಡೇ, ಮಾರುಕಟ್ಟೆಯಲ್ಲಿ ಹೇರ್ ಗ್ರೋಥ್ಗೆ ಸಾವಿರಾರು ಆಯ್ಕೆಗಳಿವೆ, ನೂರಾರು ಕ್ಲಿನಿಕ್ಗಳಿವೆ. ಇಷ್ಟೆಲ್ಲಾ ಇದ್ದರೂ ಹೇರ್ ಫಾಲ್ ಸಮಸ್ಯೆ ಮಾತ್ರ ಕಡಿಮೆಯಾಗಿಲ್ಲ. ಎಷ್ಟೇ ಹಣ ಖರ್ಚು ಮಾಡಿ ಟ್ರೀಟ್ಮೆಂಟ್ ಪಡೆದರೂ ನಿರಾಶೆಗೊಂಡವರೇ ಹೆಚ್ಚು. ಹಾಗಾದರೆ ನಾವು ಸೇವಿಸುವ ಆಹಾರದಲ್ಲಿ ಬದಲಾವಣೆ ಮಾಡಿಕೊಂಡರೆ ಒಳ್ಳೆಯದಲ್ಲವೇ? ಕೂದಲು ಉದುರುವುದನ್ನು ನಾವೇ ತಡೆಗಟ್ಟಬಹುದು. ಹಾಗಾದರೆ ಬನ್ನಿ, ಈ ಲೇಖನದಲ್ಲಿ ಹೇರ್ ಫಾಲ್ ನಿಲ್ಲಿಸುವಂತಹ 5 ಮ್ಯಾಜಿಕಲ್ ಆಹಾರ ಪದಾರ್ಥಗಳ ಬಗ್ಗೆ ತಿಳಿದುಕೊಳ್ಳೋಣ.
ಸುಲಭವಾಗಿ ಸಿಗುವ ಈ ಆಹಾರ ಪದಾರ್ಥಗಳನ್ನು ಆಯುರ್ವೇದ ಮಾತ್ರವಲ್ಲದೆ ಆಧುನಿಕ ವಿಜ್ಞಾನವೂ ಕೂದಲಿನ ಬೆಳವಣಿಗೆಯಲ್ಲಿ ಇವುಗಳ ಮಹತ್ವವನ್ನು ಒಪ್ಪಿಕೊಂಡಿದೆ. ಹಾಗಾದರೆ ಈ ಆಹಾರ ಪದಾರ್ಥಗಳನ್ನು ಹೇಗೆ ಮತ್ತು ಯಾವಾಗ ಸೇವಿಸಬೇಕು ಎಂಬುದನ್ನು ನೋಡೋಣ ಬನ್ನಿ.
1. ಬಾದಾಮಿ
ಬಾದಾಮಿಯಲ್ಲಿ ಬಯೋಟಿನ್ ಸಹಜವಾಗಿ ಸಿಗುತ್ತದೆ. ಬಾದಾಮಿ ಎಣ್ಣೆಯನ್ನು ತಲೆಗೆ ಹಚ್ಚುವುದರಿಂದ ಕೂದಲಿನ ಬೆಳವಣಿಗೆ ಹೆಚ್ಚಾಗುತ್ತದೆ. ಇದರಲ್ಲಿರುವ ವಿಟಮಿನ್ ಇ ಯಿಂದ ಹೇರ್ ಫಾಲ್ ಕಡಿಮೆಯಾಗುತ್ತದೆ. ಬಾದಾಮಿಯನ್ನು ನೀರಿನಲ್ಲಿ ನೆನೆಸಿ ತಿನ್ನಿ, ಅಥವಾ ಹಾಲಿಗೆ ಬೆರೆಸಿಯೂ ಕುಡಿಯಬಹುದು. ರಾತ್ರಿ ಮಲಗುವ ಮುನ್ನ ಕುಡಿದರೆ ನಿದ್ದೆ ಕೂಡ ಚೆನ್ನಾಗಿ ಬರುತ್ತದೆ.
2. ಆಮ್ಲಾ (ನೆಲ್ಲಿಕಾಯಿ)
ಕೇವಲ ಭಾರತದಲ್ಲಿ ಮಾತ್ರವಲ್ಲ, ಆಮ್ಲಾ ಎಲ್ಲಾ ದೇಶಗಳಲ್ಲೂ ಹೇರ್ ಗ್ರೋಥ್ಗೆ ಫೇಮಸ್ ಆಗಿದೆ. ಇಂದು ಬಹುತೇಕ ಹೇರ್ ಪ್ರಾಡಕ್ಟ್ಗಳು — ಶ್ಯಾಂಪೂ ಇರಲಿ, ಕಂಡೀಷನರ್ ಇರಲಿ, ಹೇರ್ ಆಯಿಲ್ ಇರಲಿ — ಈ ಆಮ್ಲಾವನ್ನು ಬಳಸಿರುತ್ತಾರೆ. ಇದು ಹೇರ್ ಫಾಲಿಕಲ್ಸ್ ಅನ್ನು ಉತ್ತೇಜಿಸಿ, ಹೇರ್ ರೂಟ್ಸ್ ಅನ್ನು ಬಲಪಡಿಸುತ್ತದೆ. ಇದು ಒಗರು ರುಚಿಯದ್ದಾಗಿರುವುದರಿಂದ, ಆಮ್ಲಾ ಜ್ಯೂಸ್ ಕುಡಿಯಬಹುದು ಅಥವಾ ಆಮ್ಲಾ ಉಪ್ಪಿನಕಾಯಿಯನ್ನೂ ಬಳಸಬಹುದು.
3. ಮಜ್ಜಿಗೆ
ಮಜ್ಜಿಗೆಯಲ್ಲಿ ಲ್ಯಾಕ್ಟಿಕ್ ಆಸಿಡ್ ಮತ್ತು ಪ್ರೊಬಯೋಟಿಕ್ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಊಟದ ಬಳಿಕ ಇದನ್ನು ಸೇವಿಸಿದರೆ ನಿಮ್ಮ ಜೀರ್ಣ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಜೀರ್ಣಕ್ರಿಯೆ ಸರಿಯಾದರೆ, ಕೂದಲಿಗೆ ಬೇಕಾದ ಪೋಷಕಾಂಶಗಳನ್ನು ದೇಹ ಸರಿಯಾಗಿ ಹೀರಿಕೊಳ್ಳುತ್ತದೆ. ಮಜ್ಜಿಗೆ ದೇಹವನ್ನು ತಂಪಾಗಿಸುವುದರಿಂದ ದೇಹದ ಉಷ್ಣತೆ ಕೂಡ ಕಡಿಮೆಯಾಗುತ್ತದೆ. ಮಜ್ಜಿಗೆ ನ್ಯಾಚುರಲ್ ಹೇರ್ ಶ್ಯಾಂಪೂ ಮತ್ತು ಹೇರ್ ಕಂಡೀಷನರ್ ಆಗಿಯೂ ಕೆಲಸ ಮಾಡುತ್ತದೆ.
4. ಕರಿಬೇವು
ನಿಮ್ಮ ಮನೆಗಳಲ್ಲಿ ಹಿರಿಯರು ಹೇಳುವುದನ್ನು ನೀವು ಕೇಳಿರಬಹುದು — ಕರಿಬೇವಿನ ಸೊಪ್ಪು ಕೂದಲಿಗೆ ತುಂಬಾ ಒಳ್ಳೆಯದು ಎಂದು. ಇದು ಸತ್ಯ. ಇದನ್ನು ಸೇವಿಸುವುದರಿಂದ ಹೇರ್ ಬ್ರೇಕೇಜ್ ತಪ್ಪಿಸಬಹುದು. ಇದರಲ್ಲಿರುವ ವಿಟಮಿನ್ ಬಿ ಮತ್ತು ಆಂಟಿಆಕ್ಸಿಡೆಂಟ್ಸ್ ನಮ್ಮ ಸ್ಕಾಲ್ಪ್ನಲ್ಲಿ ರಕ್ತಸಂಚಾರವನ್ನು ಸರಾಗಗೊಳಿಸಿ ಕೂದಲಿಗೆ ಪೋಷಣೆ ನೀಡುತ್ತದೆ. ದಕ್ಷಿಣ ಭಾರತೀಯರಿಗೆ ದಟ್ಟವಾದ ಉದ್ದ ಕೂದಲು ಇರುವುದಕ್ಕೆ ಕಾರಣ, ಪ್ರತಿ ಅಡುಗೆಗೂ ಒಗ್ಗರಣೆಗೆ ಬಳಸುವ ಕರಿಬೇವಿನ ಎಲೆಗಳೇ. ಉತ್ತಮ ಪ್ರಯೋಜನ ಪಡೆಯಬೇಕೆಂದರೆ, ಹಸಿ ಕರಿಬೇವಿನ ಎಲೆಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿ.
5. ಕ್ಯಾರೆಟ್
ಕ್ಯಾರೆಟ್ನಲ್ಲಿ ವಿಟಮಿನ್ ಎ ಇರುತ್ತದೆ, ಇದು ಕೂದಲಿಗೆ ಒಳ್ಳೆಯದು. ಇದರಲ್ಲಿ ಬಯೋಟಿನ್ ಕೂಡ ಇದೆ. ಇದರಿಂದ ತಯಾರಾಗುವ ಕ್ಯಾರೆಟ್ ಆಯಿಲ್ಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ. ಇದರಲ್ಲಿರುವ ವಿಟಮಿನ್ ಸಿ ಮತ್ತು ಕೆ ಹೇರ್ ಏಜಿಂಗ್ ಅನ್ನು ತಡೆಯುತ್ತದೆ. ನಿಮಗೆ ಹೇರ್ ಫಾಲ್ ಆಗುತ್ತಿದ್ದರೆ ಅಥವಾ ಹೇರ್ ಥಿನ್ನಿಂಗ್ ಆಗುತ್ತಿದ್ದರೆ, ನಿಮ್ಮ ಆಹಾರದಲ್ಲಿ ಕ್ಯಾರೆಟ್ ಸೇರಿಸಿಕೊಳ್ಳಿ.
ಇವಿಷ್ಟೇ ಕೂದಲಿನ ರಕ್ಷಣೆಗಿರುವ 5 ಸೂಪರ್ ಫುಡ್ಗಳು.
ಹೇರ್ ಫಾಲ್ ಮತ್ತು ಹೇರ್ ಥಿನ್ನಿಂಗ್ ತಡೆಯುವ 5 ಸೂಪರ್ ಫುಡ್ಗಳು
Written By
Raksha V
Content Writer15 years of experience in media and digital media as a Reporter, Sr. Anchor Voice Over artist
Comments
No comments yet.