ನೇಪಾಳದ ಪ್ರವಾಹಕ್ಕೆ ಚೈನಾ ಕಾರಣ..? ಈ ಮಾತಲ್ಲಿ ನಿಜ ಎಷ್ಟು ಸುಳ್ಳೆಷ್ಟು ಅನ್ನೋದಕ್ಕಿಂತ ಇಂಥ ಅನುಮಾನ ಹೆಚ್ಚಾಗ್ತಲೇ ಇದೆ. ಅದಕ್ಕೆ ಕಾರಣವಾಗ್ತಾ ಇರೋದು ಚೈನಾ ಈ ಹಿಂದೆ ಮುಚ್ಚಿಟ್ಟಿದ್ದ ಒಂದಷ್ಟು ಸತ್ಯಗಳು. ನಿಮಗೆ ಗೊತ್ತಿರಲಿ, ಶೀತಲ ಸಮರದ ಕಾಲದಲ್ಲಿ ಸೋವಿಯತ್ ಯೂನಿಯನ್ನ್
ಐರನ್ ಕರ್ಟನ್ ಅಂತ ಕರೆಯಲಾಗ್ತಾ ಇತ್ತು. ಅಂದ್ರೆ ಸೋವಿಯತ್ ಯೂನಿಯನ್ನಲ್ಲಿ ನಡೆಯುವ ಯಾವುದೇ ವಿಷ್ಯಗಳು ಹೊರ ಬರಬೇಕು ಅಂದ್ರೆ ಅದಕ್ಕೆ ಸರ್ಕಾರಿ ಮುದ್ರೆ ಇರಬೇಕು, ಇಲ್ಲದೇ ಇದ್ರೆ ಅಲ್ಲಿಂದ ಒಂದೇ ಒಂದು ಸಣ್ಣ ಮಾಹಿತಿ ಕೂಡಾ ಹೊರಗೆ ಬರ್ತಾ ಇರಲಿಲ್ಲ. ಅಷ್ಟರ ಮಟ್ಟಿಗೆ ಸೋವಿಯತ್ ಗೌಪ್ಯತೆಯನ್ನ ಕಾಪಾಡಿಕೊಂಡಿತ್ತು. ಚೈನಾ ಕೂಡಾ ಈ ವಿಷ್ಯದಲ್ಲಿ ಹಿಂದೆ ಬಿದ್ದಿರಲಿಲ್ಲಾ.ಆದ್ರೆ ಚೈನಾದಲ್ಲಿನ ಮಾಹಿತಿಗಳನ್ನ ಹೊರ ತೆಗಯೋದು ಸುಲಭ ಆಗಿತ್ತು. ಹೀಗಾಗಿನೇ ಚೈನಾನ ಬ್ಯಾಂಬೂ ಕರ್ಟನ್ ಅಂತ ಕರೆಯಲಾಗ್ತಾ ಇತ್ತು. ಇಂಥಹ ಬ್ಯಾಂಬೂ ಕರ್ಟನ್ನಲ್ಲಿ 1975ರಲ್ಲಿ ಒಂದು ದುರ್ಘಟನೆ ಸಂಭವಿಸಿ ಬಿಟ್ಟಿತ್ತು, ಆದ್ರೆ ಅದ್ರಲ್ಲಿ
ಬಲಿಯಾದವ್ರ ಸಂಖ್ಯೆಯನ್ನ ಚೈನಾ ಸತತ ಇಪ್ಪತ್ತು ವರ್ಷಗಳ ಕಾಲ ಮುಚ್ಚಿಟ್ಟಿತ್ತು ಅಂದ್ರೆ ನೀವು ನಂಬಲೇ ಬೇಕು. ಹಾಗಾದ್ರೆ ಅಲ್ಲಿ ನಡೆದ ದುರ್ಘಟನೆ ಎಂಥದ್ದು.?ನಿಜಕ್ಕೂ ಆ ರಾತ್ರಿ ಚೈನಾದ 62 ಡ್ಯಾಂಗಳು ಒಡೆದು ಹೋದ್ವಾ.? ಅ್ಲಲಿ ಬಲಿಯಾಗಿದ್ದು 26 ಸಾವಿರನಾ 2 ಲಕ್ಷದ 60 ಸಾವಿರ ಮಂದಿನಾ ಅನ್ನೊದ್ರ ಬಗೆಗಿನ ಕುತೂಹಲಕಾರಿ ಮಾಹಿತಿಗಾಗಿ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ.
Also Read: ಅಮೆರಿಕಾ ವಿರುದ್ಧ ಇಸ್ರೇಲ್ ಕೆಂಗಣ್ಣು: Trump removes Syria from 'terrorism list'.
62 ಡ್ಯಾಂ ಢಮಾರ್..2 ಲಕ್ಷ ಬಲಿ: China Dam Secret.!
Written By
Raghavendra N
Content Writer17 years of experience in Media and Digital Media.Expertise in Scripting, Video Production,Documentary Making and ad Films
Comments
No comments yet.