ಪ್ರೋಟೀನ್ ನಮ್ಮ ದೇಹಕ್ಕೆ ಅತ್ಯಗತ್ಯವಾದ ಪೋಷಕಾಂಶಗಳಲ್ಲಿ ಒಂದಾಗಿದೆ. ಇದನ್ನು ದೇಹದ "ಬಿಲ್ಡಿಂಗ್ ಬ್ಲಾಕ್" ಎಂದು ಕರೆಯಲಾಗುತ್ತದೆ. ನಮ್ಮ ದೇಹದ ಪ್ರತಿಯೊಂದು ಜೀವಕೋಶ, ಸ್ನಾಯು, ಚರ್ಮ ಮತ್ತು ಅಂಗಾಂಗಗಳ ಆರೋಗ್ಯಕ್ಕೆ ಪ್ರೋಟೀನ್ ಅಗತ್ಯ. ವ್ಯಾಯಾಮ, ದೈಹಿಕ ಶ್ರಮ ಅಥವಾ ಗಾಯದ ನಂತರ ಸ್ನಾಯುಗಳು ಹಾನಿಗೊಳಗಾಗುತ್ತವೆ. ಅವುಗಳನ್ನು ಪುನರ್ ನಿರ್ಮಿಸಿ ಬಲಪಡಿಸುವ ಕೆಲಸವನ್ನು ಪ್ರೋಟೀನ್ ಮಾಡುತ್ತದೆ. ಆದ್ದರಿಂದ ಕ್ರೀಡಾಪಟುಗಳು, ಜಿಮ್ ಮಾಡುವವರು ಹಾಗೂ ಹಿರಿಯರಿಗೆ ಸಾಕಷ್ಟು ಪ್ರೋಟೀನ್ ಅಗತ್ಯ. ಮಕ್ಕಳು, ಹದಿಹರೆಯದವರು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಲ್ಲಿ ದೇಹದ ಬೆಳವಣಿಗೆ ವೇಗವಾಗಿರುತ್ತದೆ. ಈ ಸಮಯದಲ್ಲಿ ಹೊಸ ಜೀವಕೋಶಗಳು ಮತ್ತು ಅಂಗಾಂಶಗಳು ರೂಪುಗೊಳ್ಳಲು ಪ್ರೋಟೀನ್ ಬಹಳ ಮುಖ್ಯ.
ಪ್ರೋಟೀನ್ ಕೇವಲ ಜಿಮ್ ಮಾಡುವವರಿಗೆ ಮಾತ್ರವಲ್ಲ. ಮಕ್ಕಳು, ಯುವಕರು, ಮಹಿಳೆಯರು, ಪುರುಷರು ಮತ್ತು ಹಿರಿಯರು ಸೇರಿದಂತೆ ಪ್ರತಿಯೊಬ್ಬರಿಗೂ ಪ್ರತಿದಿನ ಅಗತ್ಯವಿರುವ ಪೋಷಕಾಂಶವಾಗಿದೆ. ಇದು ಸ್ನಾಯುಗಳ ಆರೋಗ್ಯ, ರೋಗನಿರೋಧಕ ಶಕ್ತಿ, ಗಾಯಗಳ ಗುಣಮುಖತೆ, ಕೂದಲು ಮತ್ತು ಚರ್ಮದ ಆರೈಕೆ, ಹಾರ್ಮೋನುಗಳ ಉತ್ಪಾದನೆ ಹಾಗೂ ದೇಹದ ಸಮಗ್ರ ಆರೋಗ್ಯವನ್ನು ಕಾಪಾಡಲು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ನಿಮ್ಮ ದೇಹದಲ್ಲಿ ಪ್ರೋಟೀನ್ ಕಡಿಮೆ ಆದರೆ, ದೇಹವೇ ಸಿಗ್ನಲ್ ಕೊಡುತ್ತೆ ಹಾಗಾದ್ರೆ ನಿಮ್ಮ ದೇಹಕ್ಕೆ ಹೆಚ್ಚು ಪ್ರೋಟೀನ್ ಬೇಕು ಅಂತ ಹೇಳುವ ಈ 6 ಲಕ್ಷಣಗಳನ್ನ ಕಡೆಗಣಿಸಬೇಡಿ. ಅವು ಯಾವುವು ಅನ್ನೋದನ್ನ ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
Also Read: ತೊಡೆಗಳು ಹೇಳುತ್ವಾ ನಿಮ್ಮ ಆಯುಷ್ಯದ ಗುಟ್ಟು :Thin Thighs = Higher Risk.?
ಈ 6 ಲಕ್ಷಣಗಳು ಕಂಡು ಬಂದ್ರೆ ಎಚ್ಚರ..! Low Protein.!?
Written By
Raksha V
Content Writer15 years of Experience in Media and Digital Media as a Sr.Anchor,Correspondent and Content Writer.
Comments
No comments yet.