ಕಾವೇರಿ ನದಿ ನೀರು ವಿವಾದ ಈಗ ಮತ್ತೆ ಮುನ್ನಲೆಗೆ ಬಂದಿದೆ. ಕಳೆದ ಜುಲೈ 28ರಂದು ಪ್ರತಿ ದಿನ 3500 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಹೇಳಿತ್ತು. ಮೊದಲಿಗೆ ಅಷ್ಟೊಂದು ನೀರನ್ನ ಬಿಡುಗಡೆ ಮಾಡೋದಕ್ಕೆ ಸಾಧ್ಯ ಇಲ್ಲ ಅಂತ ಕರ್ನಾಟಕ ಹೇಳಿತ್ತಾದ್ರು, ಆ ಬಳಿಕ ಮಳೆ ಹೆಚ್ಚಾಗಿ ಬಿದ್ದ ಕಾರಣ ಕಬಿನಿ ಜಲಾಶಯ ಭರ್ತಿಯಾಯ್ತು. ಅಲ್ಲಿಂದ ಆಗಸ್ಟ್ 10ರ ವರೆಗೂ ಸರಿ ಸುಮಾರು 9 ಟಿಎಂಸಿಗೂ ಹೆಚ್ಚು ನೀರು ಬಿಳಿಗೊಂಡ್ಲು ಮಾಪನ ಕೇಂದ್ರದಲ್ಲಿ ಹರಿದಿದೆ. ಇದು ಪ್ರಾಧಿಕಾರ ಹೇಳಿದ್ದ 4.5 ಟಿಎಂಸಿಗಿಂತಳಲು ಹೆಚ್ಚು ನೀರು ತಮಿಳುನಾಡನ್ನ ಸೇರಿದೆ ಅನ್ನೋ ಅಂಕಿ ಅಂಶವನ್ನ ಕೊಟ್ಟಿದೆ. ಹಾಗೆನೇ ಇನ್ನೂ ಕೂಡಾ ನೀರು ಹರೀತಲೇ ಇದೆ. ಇಷ್ಟಾದ್ರು ತಮಿಳುನಾಡಿನ ನೀರಿನ ದಾಹ ಕಡಿಮೆ ಆಗಿಲ್ಲಾ.
ಆಗಸ್ಟ್ 11ರಂದು ದೆಹಲಿಯಲ್ಲಿ ನಡೆದ The Cauvery Water Regulation Committee ಕಾವೇರಿ ನೀರು ನಿಯಂತ್ರಣ ಸಮಿತಿಯ ಸಭೆಯಲ್ಲಿ ಕರ್ನಾಟಕಕ್ಕೆ ವ್ಯತಿರಿಕ್ತವಾಗಿ ಆದೇಶ ಬಂದಿದೆ. ಸಿಡಬ್ಲುಆರ್ಸಿ (CWRC) ಮುಖ್ಯಸ್ಥ ವಿನೀತ್ ಗುಪ್ತಾ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ (Karnataka) ಕರ್ನಾಟಕ ಹಾಗೂ (Tamilnadu) ತಮಿಳುನಾಡಿನ ಅಧಿಕಾರಿಗಳು ಭಾಗಿಯಾಗಿದ್ರು. ಈ ಸಭೆಯಲ್ಲಿ ಕರ್ನಾಟಕದ ಪರವಾಗಿ ಕಾವೇರಿ(cauvery)ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ MD ಮಹೇಶ್ ಅವರು ಖುದ್ದಾಗಿ ಹಾಜರಿದ್ರೆ, ತಮಿಳುನಾಡಿನ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗಿಯಾಗಿದ್ರು. ಕಾವೇರಿ ಕೊಳ್ಳದ ಜಲಾಶಯಗಳ ನೀರಿನ ಮಟ್ಟ ಹಾಗೂ ವಸ್ತುಸ್ಥಿತಿಯನ್ನು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಸಿಡ್ಬುಆರ್ಸಿ(CWRC) ಮುಂದಿಟ್ಟಿದ್ದರು..ಇಷ್ಟಾದರು ಮುಂದಿನ ಹದಿನೈದು ದಿನಗಳ ಕಾಲ ಪ್ರತಿ ದಿನ 12000 ಕ್ಯೂಸೆಕ್ನಂತೆ ನೀರನ್ನ ಹರಿಸಿ ಅನ್ನೋ ಆದೇಶವನ್ನ ಸಿಡ್ಬ್ಲುಆರ್ಸಿ ಕೊಟ್ಟಿದೆ. ಇಲ್ಲಿ ಪ್ರತಿ ಬಾರಿಯಂತೆ ಈ ಬಾರಿ ಕೂಡಾ ಕೆಆರ್ಎಸ್(KRS) ಸಮಸ್ಯೆಗೆ ಸಿಲುಕಿದೆ. ಹಾಗಾಗಿನೇ ಅದನ್ನ ಕಾಪಾಡುವ ಹೊಣೆ ಕಬಿನಿ(Kabini Dam) ಡ್ಯಾಂ ಮೇಲೆ ಬಿದ್ದಿದೆ. ಈ ಕಬಿನಿ ಡ್ಯಾಂ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
Also Read: PM Modi Breaks Jawaharlal Nehru's Record : ಸತ್ಯ.. ಮಿಥ್ಯ..?
ಕರ್ನಾಟಕಕ್ಕೆ ಕಾವೇರಿ ಶಾಕ್: Cauvery River Water Dispute.!
Written By
Raghavendra N
Content Writer17 years of experience in Media and Digital Media.Expertise in Scripting, Video Production,Documentary Making and ad Films
Comments
No comments yet.