ಅದು ಪೂರ್ವ ಘಟ್ಟಗಳ ನಡುವಲ್ಲಿರೋ ಅದ್ಭುತ ಸ್ಥಳ ಅಲ್ಲಿಗೆ ಹೋಗಬೇಕು ಅಂದ್ರೆ ಕನಿಷ್ಠ ನಾಲ್ಕು ಗಂಟೆಗಳ ಕಾಲ ನಡೆಲೇಬೇಕಾಗುತ್ತೆ. ಆ ಹಾದಿಲಿ ಲೆಕ್ಕವಿಲ್ಲದಷ್ಟು ಔಷಧ ಸಸ್ಯಗಳಿವೆ, ಅಲ್ಲೇ ಎಲ್ಲೋ ಸಿದ್ಧ ಪುರುಷರು ಓಡಾಡುತಾ ಇದ್ದಾರೆನೋ ಅನ್ನೋ ಹಾಗೆ ನಮಗೆ ವಾಗುತ್ತೆ. ಆ ಕಾಡಿನ ನಿಶಬ್ಧ ಒಂದು ವಿಶೇಷ ಅನುಭೂತಿಯನ್ನ ನಮ್ಮಲ್ಲಿ ಉಂಟು ಮಾಡುವ ಹೊತ್ತಿಗೆ, ಅಲ್ಲಿನ ಕಪಿಗಳ ಚೇಷ್ಟೆ ಕಿರಿಕಿರಿಯನ್ನ ಮಾಡೋದಕ್ಕೆ ಶುರು ಮಾಡುತ್ತೆ. ಸುಮಾರು 2000 ವರ್ಷಗಳ ಇತಿಹಾಸವನ್ನ ಹೊಂದಿರುವ ಆ ಜಾಗದಲ್ಲಿ ಮಲ್ಲಿಕಾರ್ಜುನ ನೆಲೆಸಿದ್ದಾನೆ. ಹೀಗಾಗಿನೇ ಇದನ್ನ ದಕ್ಷಿಣ ಕಾಶಿ ಅಂತ ಸ್ಥಳೀಯರು ನಂಬುತ್ತಾರೆ. ಅಲ್ಲಿ ರಾಮಾಯಣದ ಕಥೆ ಕೇಳಿ ಬರುತ್ತೆ, ಶಿವನ ಆಗಮನದ ಸ್ಥಳ ಪುರಾಣ ಆ ನೆಲದಲ್ಲಿ ಮಾರ್ದನಿಸುತ್ತೆ. ಬೆಟ್ಟದ ಮೇಲಿನ ಮಲ್ಲಿಕಾರ್ಜುನನನ್ನ ನೋಡಿ ಹೊರಬಂದು ನಿಂತರೆ ಪ್ರಕೃತಿಯ ಸೌಂದರ್ಯದ ಅನುಭವ ನಮಗಾಗುತ್ತೆ. ಭಾರತ ವೈಶಿಷ್ಟ್ಯಗಳ ನಾಡು ನಮ್ಮಲ್ಲಿ ಪ್ರತಿ ಕಲ್ಲಿಗೂ ಪೂಜನೀಯ ಸ್ಥಾನ ಇದೆ. ಪ್ರಕೃತಿಯನ್ನ ಪೂಜಿಸುತ್ತೀವಿ, ದೇವರೇ ಇಲ್ಲ ಅನ್ನೋ ನಿರೀಶ್ವರವಾದಿಗಳನ್ನು ಗೌರವಿಸುತ್ತೀವಿ. ದೇವನೊಬ್ಬ ನಾಮಹಲವು ಅನ್ನೋ ಸಿದ್ಧಾಂತಕ್ಕೆ ಕೂಡ ತಲೆದೂಗುತೀವಿ. ಮನುಷ್ಯನಲ್ಲಿ, ಪ್ರಾಣಿ ಪಕ್ಷಿಗಳಲ್ಲಿ, ಪರಿಸರದಲ್ಲಿ, ಪ್ರತಿಯೊಂದರಲ್ಲೂ ಆ ಭಗವದಾನಂದವನ್ನ ಕಾಣುವ ಪುಣ್ಯಭೂಮಿ ಭಾರತ. ಹೀಗಾಗಿನೇ ನಮ್ಮಲ್ಲಿನ ಪ್ರತಿ ಗ್ರಾಮಕ್ಕೂ ಪ್ರತಿ ಊರಿಗೂ ಪುರಾಣಗಳ ಜೊತೆ ಒಂದು ನಂಟಿದೆ ನಮ್ಮಲ್ಲಿ ಐತಿಹಾಸಿಕ ಮತ್ತು ಪೌರಾಣಿಕ ಮಹತ್ವವನ್ನು ಪಡೆಕೊಂಡಿರುವ ಲಕ್ಷಾಂತರ ದೇವಾಲಯಗಳಿವೆ. ಹಾಗಾದರೆ ಇಲ್ಲಿ ನಾವು ಹೇಳುತ್ತಿರುವ ಆ ಸ್ಥಳ ಯಾವುದು.? ಅದರ ಸ್ಥಳ ಪುರಾಣ ಏನು ಅನ್ನೋದರ ಬಗ್ಗೆ ಒಂದಷ್ಟು ಮಾಹಿತಿಯನ್ನ ತಿಳಿದುಕೊಳ್ಳೋಕೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
Also Read: ಅನ್ನ ನೀಡುವ ತಾಯಿಯ ದಿವ್ಯ ಸನ್ನಿಧಿ: Horanadu Annapoorne..!
ಪರ್ವತದ ಮೇಲೆ ಹರನ ನಿಗೂಢ ಹೆಜ್ಜೆ..! Parvathamalai Trek.!
Written By
Raghavendra N
Content Writer17 years of experience in Media and Digital Media.Expertise in Scripting, Video Production,Documentary Making and ad Films
Comments
No comments yet.