Global Affairs

ಪುತಿನ್- ಪಿಂಗ್ ವಿರುದ್ಧ ಸಾರುತ್ತಾ ಜಪಾನ್ ಯುದ್ಧ: Japan Angry on Putin.!

ಪುತಿನ್- ಪಿಂಗ್ ವಿರುದ್ಧ ಸಾರುತ್ತಾ ಜಪಾನ್ ಯುದ್ಧ: Japan Angry on Putin.!
ರಷ್ಯಾ-ಯುಕ್ರೈನ್ ಯುದ್ಧ ಈಗ ಎರಡನೇ ಹಂತಕ್ಕೆ ಕಾಲಿಡುತಾ ಇದೆ. ಈ ಯುದ್ಧವನ್ನ ಇನ್ನಷ್ಟು ದಿನ ಮುಂದುವರಿಸುತ್ತಾ,ರಷ್ಯಾದ ಶಕ್ತಿಯನ್ನ ಕಡಿಮೆ ಮಾಡಬೇಕು ಅಂತ ಯುರೋಪ್ ಭಾವಿಸುತ್ತಾ ಇರುವಾಗಲೇ ಯುಕ್ರೇನ್ ಮೇಲಿನ ದಾಳಿಯನ್ನ ಮತ್ತಷ್ಟು ತೀವ್ರಗೊಳಿಸಿ, ಸಾಧ್ಯ ಆದರೆ ಯುರೋಪಿಯನ್ ಯೂನಿಯನ್ ದೇಶಗಳಿಗೆ ಕೂಡ ಈ ಬಾರಿ ಒಂದು ಪಾಠವನ್ನ ಕಲಿಸಿಬಿಡಬೇಕು ಅಂತ ಪುತಿನ್ ತಯಾರಾದ ಹಾಗೆ ಕಾಣ್ತಾ ಇದೆ. ಅವರು ದೊಡ್ಡ ಯುದ್ಧಕ್ಕೆ ಸುಮಾರು 5 ಲಕ್ಷ ಸೈನಿಕರನ್ನ ಜೋಡಿಸಿಕೊಳ್ಳುತ್ತಾ ಇದ್ದಾರೆ ಅನ್ನೋ ಮಾಹಿತಿಗಳು ಬರ್ತಾ ಇವೆ. ಇದೇ ಹಂತದಲ್ಲಿ ಪೂರ್ವ ಭಾಗದ ಜಗತ್ತಿನ ಮೇಲೆ ಕೂಡ ಸಣ್ಣಗೆ ಯುದ್ಧದ ಕಾರ್ಮೋಡಗಳು ಆವರಿಸಿಕೊಳ್ಳುವ ಸೂಚನೆಗಳು ಸಿಗತಾ ಇವೆ. ಜಪಾನ್ ನಲ್ಲಿ ಶುರುವಾಗಿರುವ ಬದಲಾವಣೆ ಚೈನಾ ರಷ್ಯಾ ಹಾಗೂ ಉತ್ತರ ಕೊರಿಯಾಗಳನ್ನ ಎಚ್ಚರಿಕೆಯಿಂದ ಇರೋ ಹಾಗೆ ಮಾಡ್ತಾ ಇದೆ. ಮೊನ್ನೆ ಜಪಾನ್ ತನ್ನ ರಕ್ಷಣೆಗೆ ಸಂಬಂಧಪಟ್ಟ ಆತಂಕಗಳು ಹಾಗೂ ಅದನ್ನ ಸರಿಪಡಿಸಿಕೊಳ್ಳೋದಕ್ಕೆ ತಗೋಬೇಕಾದ ಕ್ರಮಗಳ ಬಗ್ಗೆ ಒಂದು ಶ್ವೇತ ಪತ್ರವನ್ನ ಹೊರಡಿಸಿದೆ. ಅದರ ಬೆನ್ನಲ್ಲೆ ರಷ್ಯಾ ಹಾಗೂ ಚೈನಾಗಳ ತಕಥೈ ಕೂಡ ಆರಂಭಗೊಂಡಿದೆ. ರಷ್ಯಾದ ಅಧ್ಯಕ್ಷ ಪುತಿನ್ ಮೊಟ್ಟಮೊದಲ ಬಾರಿಗೆ ಸೀದ ಕುರಿಲ್ ದ್ವೀಪಗಳಿಗೆ ಬಂದಿದ್ದಾರೆ. ಈ ಮೂಲಕ ಜಪಾನ್ ಇನ್ನಷ್ಟು ಕೆರಳೋದಕ್ಕೆ ಅವಕಾಶವನ್ನ ಕಲ್ಪಿಸಿ ಕೊಟ್ಟಿದ್ದಾರೆ. ಇನ್ನು ಚೈನಾ ಕೂಡ ಜಪಾನ್ ವಿರುದ್ಧ ಬುಸುಗುಟ್ಟೋದಕ್ಕೆ ಶುರು ಮಾಡಿದೆ. ಹಾಗಾದರೆ ಜಪಾನ್ ಬಿಡುಗಡೆ ಮಾಡಿರುವ ಶ್ವೇತ ಪತ್ರ ಏನು.? ಆ ದ್ವೀಪಗಳಿಗೆ ಪುತಿನ್ ಯಾಕೆ ಬಂದರು.? ಆ ದ್ವೀಪಗಳ ಮಹತ್ವ ಏನು ಅಂತ ತಿಳಿದುಕೊಳ್ಳೋಕೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

Also Read:BRICSಗೆ ಭಾರತದ UPI: BRICS 2026.!
M S Raghavendra
Written By

M S Raghavendra

Cheif Editor

Over 30 Years of Experience in Media. Expertise in Youtube Content Creation, Choosing niche ,Digital Marketing.

Comments

No comments yet.