Global Affairs

ಮಾವೋಗೆ ಮಣ್ಣುಮುಕ್ಕಿಸಿತ್ತಾ ಪುಟ್ಟ ದ್ವೀಪ: The Rise of Mao Zedong.!

ಮಾವೋಗೆ ಮಣ್ಣುಮುಕ್ಕಿಸಿತ್ತಾ ಪುಟ್ಟ ದ್ವೀಪ: The Rise of Mao Zedong.!
ಚೈನಾ ಇವತ್ತು ಜಗತ್ತಿನ ಸೂಪರ್​ ಪವರ್ಗಳಲ್ಲಿ ಒಂದು. ಜಗತ್ತಿನ ಅತಿ ದೊಡ್ಡ ನೌಕಾ ಪಡೆಯನ್ನ ಹೊಂದಿರುವ ಚೈನಾ, ಅಮೆರಿಕಾಕ್ಕೆ ಸರಿಸಮನಾಗಿ ತನ್ನ ಸೇನೆಯನ್ನ ಕೂಡ ಬೆಳೆಸಿಕೊಂಡಿದೆ. ಅಮೆರಿಕಾ ಯುದ್ಧ ವಿಮಾನಗಳ ತಲೆ ಮೇಲೆ ಹೊಡೆದಂತೆ ಅವುಗಳ ಟೆಕ್ನಾಲಜಿ ಕದ್ದು, ಅಲ್ಲೊಂದಷ್ಟು ಏರ್ ಕ್ರಾಫ್ಟ್​ಗಳನ್ ನಿರ್ಮಿಸಿಕೊಂಡಿದೆ. ಹಾಗೆನೇ ಜಾಗತಿಕ ಆರ್ಥಿಕ ವಲಯದಲ್ಲಿ ಇವತ್ತು ಚೈನಾ ನಿರ್ಣಾಯಕ ಪಾತ್ರವನ್ನ ವಹಿಸ್ತಾ ಇದ್ದು, ಚೈನಾ ಇಲ್ಲದೇ ಜಗತ್ತಿನ ಕೈಕಾಲುಗಳೇ ಆಡೋದಿಲ್ಲ ಅನ್ನೋ ಹಾಗಿದೆ..ಇಲ್ಲಿ ಚೈನಾ ಇಷ್ಟೊಂಧು ಬಲಿಷ್ಟವಾಗಿ, ಆರ್ಥಿಕ ಶಕ್ತಿಯಾಗಿ ಬೆಳೆಯೋದ್ರ ಹಿಂದೆ ಚೈನಾದ ನಿರ್ಮಾತೃ ಮಾವೋ ಜೆಡಾಮ್ಗ್​ನ ಪಾತ್ರ ಕೂಡಾ ಇದೆ. ಮಾವೋ..ಈ ಜಗತ್ತಲ್ಲಿ ಹೆಚ್ಚು ಪ್ರಲಿತಗೊಂಡ ನಾಯಕರ ಪಟ್ಟಿಯಲ್ಲಿ ಈ ಮಾವೋ ಜೆಡಾಂಗ್​ ​ಕೂಡಾ ನಿಲ್ತಾನೆ. ಚೈನಾದಲ್ಲಿ ಕ್ರಾಂತಿಯನ್ನೇಬ್ಬಿಸಿ, ಬೇರೆ ಬೇರೆ ದೇಶಗಳಿಗೂ ಕೂಡಾ ಮಾವೋ ವಾದವನ್ನ ಮುಟ್ಟುವಂತೆ ಮಾಡಿದ್ದ ಈ ಮಾವೋ, ಇವತ್ತಿನ ಚೈನಾದ ನಿಮಾತೃ ಅಂದ್ರೆ ತಪ್ಪಾಗೋದಿಲ್ಲಾ. ಚೈನಾ ಮುಖ್ಯಭೂಮಿಯಲ್ಲಿ ಈ ಮಾವೋನ ಶಕ್ತಿ ಹೆಚ್ಚಾದ ನಂತ್ರ ಶಾಂಘೈ ನಂಜಿಂಗ್, ಮಂಚೂರಿಯಾ, ಟಿಬೆಟ್, ಕ್ಸಿಂಗ್​ಜಿಯಾಂಗ್​ನಂತಹ ಪ್ರದೇಶಗಳು ಒಂದೊಂದೇ ಚೈನಾದ ಹಿಡಿತಕ್ಕೆ ಸಿಕ್ಕಿದ್ವು. ಆದ್ರೆ ಯಾರ ವಿರುದ್ದ ಮಾವೋ ದನಿ ಎತ್ತಿದ್ನೋ, ಯಾವ ಉದ್ದೇಶದಿಂದ ಅಲ್ಲಿ ಕಮ್ಯುನಿಸ್ಟ ಪಾರ್ಟಿ ಹೋರಾಟವನ್ನ ಮಾಡ್ತೋ ಆ ಗುರಿ ಇವತ್ತಿಗೂ ಈಡೇರಿಲ್ಲಾ. ತನ್ನ ಕಪಟ ಬುದ್ಧಿಯಿಂದಲೇ ಚೈನಾವನ್ನ ಒಗ್ಗೂಡಿಸಿದ್ದವನಿಗೆ ತೈವಾನ್ ಅನ್ನೊ ಪುಟ್ಟ ದೇಶದ ಸವಾಲಾಗಿ ನಿಂತದ್ದು ಮಾತ್ರ ಇತಿಹಾಸದಲ್ಲೇ ಅತ್ಯಂತ ರೋಚಕ ಅಧ್ಯಾಯ ಅಂದ್ರೂ ತಪ್ಪಾಗೋದಿಲ್ಲಾ. ಹಾಗಾದ್ರೆ ಮಾವೋ ತೈವಾನ್​ ಮೇಲೆ ಆಕ್ರಮಣ ಮಾಡೊದಕ್ಕೆ ಹೆದರಿದ್ದು ಯಾಕೆ.? ಅಲ್ಲಿ ಮಾವೊಗಾದ ಹಿನ್ನಡೆ ಏನು.? ಆ ಪುಟ್ಟ ನೆಲವನ್ನ ಒಳಗನಿಂದಲೇ ಗೆದ್ದಲು ಹಿಡಿಸೋದಕ್ಕೆ ಮಾಡಿದ್ದ ಪ್ಲಾನ್ ಏನು.? ಅದ್ರಲ್ಲಿ ಅವನು ಫೇಲ್ ಆಗಿದ್ದು ಹೇಗೆ ಅನ್ನೋದ್ರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.

Also Read: ಇಸ್ಲಾಮಿಕ್ ನ್ಯಾಟೋಗೆ ಸೌದಿ - ಪಾಕ್- ಟರ್ಕಿ: Modi - Netanyahu Secret Plan.!
Raghavendra N
Written By

Raghavendra N

Content Writer

17 years of experience in Media and Digital Media.Expertise in Scripting, Video Production,Documentary Making and ad Films

Comments

No comments yet.