ಇದು ಬಲಿಷ್ಠ ಕಾಟಿಯ ಕಥೆ: The Story Of Gaur.!
ಅದು ಜೀವ ಜಗತ್ತಿನ ಅತಿ ಬಲಿಷ್ಟ ಕಾದಾಟ. ಒಂದು ಜಗತ್ತಿನಲ್ಲಿ ಉಳಿದಿರುವ ಅತ್ಯಂತ ದೊಡ್ಡದಾದ ಮಾಂಸಹಾರಿ ಪ್ರಾಣಿ ಹುಲಿ. ಮತ್ತೊಂದು ಕೊಂಬುಗಳುಳ್ಳ ಪ್ರಾಣಿ ಪ್ರಧೇದದ ದೈತ್ಯ ಅಂತಲೇ ಕರೆಸಿಕೊಳ್ಳುವ ಕಾಟಿ. ಅವೆರಡು ಕಾದಾಟಕ್ಕೆ ನಿಂತ್ರೆ ಗೆಲ್ಲೋದ್ಯಾರು.? ಬುಹತೇಕ ಸಂದರ್ಬದಲ್ಲಿ ಹುಲಿಯ ಚಾಣಕ್ಷತೆ ಹಾಗೂ ಅದ್ರ ಶಕ್ತಿನೇ ಗೆಲ್ಲುತ್ತಾದ್ರೂ ಕೆಲವೊಮ್ಮೆ ಹುಲಿ ಕೂಡಾ ಈ ಕಾಟಿಯ ಏಟಿಗೆ ಮಕಾಡೆ ಮಲಗಿರೋದು ಇದೆ. ನೋಡೊದಕ್ಕೆ ಪ್ರಕೃತಿಯಲ್ಲಿನ ಮಝಲ್ ಮ್ಯಾನ್ಗಳ ಹಾಗೇ ಕಾಣೂವ ಕಾಟಿಗಳು, ಸೌಮ್ಯವಾಗಿ ಕಂಡ್ರು ಬಂದ್ರೂ ಪ್ರಾಣ ತೆಗೆಯುವ ಹಂತಕ್ಕೂ ಹೋಗುತ್ವೆ. ಹೀಗಾಗಿನೇ ಇವುಗಳನ್ನ ಅನ್ ಪ್ರಿಡಿಕ್ಟಬಲ್ ಅಂತ ಗುರ್ತಿಸೋದು. ಅದು 2021ರ ಜೂನ್ 17, ಭಾರತದ ಪ್ರತಿಷ್ಠಿತ ಹಿಂದೂ ಪತ್ರಿಕೆಯಲ್ಲಿ ಬಂದ ವರದಿ ಸಾಕಷ್ಟು ಜನ್ರನ್ನ ಬೆಚ್ಚಿ ಬೀಳಿಸಿತ್ತು. ಯಾಕಂದ್ರೆ ಅದ್ರಲ್ಲಿ ಇದ್ದ ವರದಿ, ಹೆಣ್ಣು ಹುಲಿಯೊಂದು ಕಾಟಿಯ ಹೊಡೆತಕ್ಕೆ ಸಾವನ್ನಪ್ಪಿದೆ ಅನ್ನೋದಾಗಿತ್ತು. ಆ ಘಟನೆ ನಡೆದದ್ದು ನಮ್ಮ ಬಂಡೀಪುರದಲ್ಲಿ. ಆ ಸುದ್ದಿ ಸಾಮಾನ್ಯ ಜನಕ್ಕೆ ಅಚ್ಚರಿಯನ್ನ ತರಬಹುದು. ಅರೇ ಇದೇನಿದು ಈ ಸುದ್ದಿ ನಿಜಾನ, ಕಾಡೆಮ್ಮೆ ಹುಲಿನಾ ಕೊಲ್ಲೋದಾ,? ಅಸಾಧ್ಯ ಕಣ್ರಿ ಅಂತ ಅನ್ನಿಸಬಹುದು. ಆದ್ರೆ ಕಾಡಿನ ಬಗ್ಗೆ ಪ್ರಾಣಿ ಪ್ರಪಂಚದ ಬಗ್ಗೆ ಹುಲಿ ಹಾಗೂ ಈ ಕಾಟಿಗಳ ಬಗ್ಗೆ ತಿಳಿದವ್ರಿಗೆ ಇದು ಅಚ್ಚರಿ ಅಲ್ಲ. ಕಾಟಿಗಳ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
Written By
Raghavendra N
Content Writer17 years of experience in Media and Digital Media.Expertise in Scripting, Video Production,Documentary Making and ad Films
Comments
No comments yet.