Global Affairs

ಇದು ಯಮನನ್ನೇ ಎದುರಿಸಿ ಗೆದ್ದವರ ಕಥೆ: Nepal Flash Flood.!

ಇದು ಯಮನನ್ನೇ ಎದುರಿಸಿ ಗೆದ್ದವರ ಕಥೆ: Nepal Flash Flood.!
ಹುಟ್ಟು ಆಕಸ್ಮಿಕ ಸಾವು ನಿಶ್ಚಿತ ಅಂತಾ ಹೇಳ್ತಾ ಇರ್ತಾರೆ ನೀವು ಕೇಳಿರ್ತೀರಿ. ಆದ್ರೆ ಯಾವುದೂ ಕೂಡಾ ಆಕಸ್ಮಿಕವಾಗಿ ಈ ಜಗತ್ತಲ್ಲಿ ನಡೆಯೋದಿಲ್ಲ.. ಇಲ್ಲಿ ಎಲ್ಲವನೂ ಮೊದಲೇ ನಿಶ್ಚಯ ಆಗಿರುತ್ತೇನೋ ಅಂತಾ ಕೂಡಾ ಸಾಕಷ್ಟು ಬಾರಿ ಅನ್ನಿಸದೇ ಇರೋದಿಲ್ಲ. ಇನ್ನು ಸಾವು ಕೂಡಾ ಅಷ್ಟೇ.. ನಮ್ಮ ಸಮಯ ಬರೋವರೆಗೆ ಸಾಕ್ಷಾತ್ತೂ ಆ ಕಾಲನಿಗೂ ನಮ್ಮನ್ನ ಕದಲಿಸೋದಕ್ಕೆ ಸಾಧ್ಯ ಆಗೋದಿಲ್ಲ.. ಅಕಸ್ಮಾತ್ ನಮ್ಮ ಸಮಯ ಮುಗಿದರೆ ನಮ್ಮನ್ನ ಉಳಿಸೋದಕ್ಕೆ ಯಾವ ದೈವವೂ ಬರೋದೂ ಇಲ್ಲ.. ನೇಪಾಳದ ಪ್ರವಾಹ ಅಲ್ಲಿನ ದುರಂತಗಳು ಹಾಗೂ ಅದರ ನಡುವೆ ಕೂಡಾ ಅಲ್ಲಿ ಕಾಣಸಿಗ್ತಾ ಇರೋ ಕೆಲವು ಅಚ್ಚರಿಗಳನ್ನ ಕಂಡಾಗ ನಮ್ಮ ಟೈಂ ಮುಗಿಯುವವರೆಗೆ ಯಾರೂ ನಮ್ಮನ್ನ ಏನೂ ಮಾಡೋದಕ್ಕೆ ಆಗೋದಿಲ್ಲ ಅನ್ನೋ ಮಾತುಗಳು ಸತ್ಯಾ ಅನ್ನಿಸಿಬಿಡುತ್ವೆ.. ನೇಪಾಳದ ಪ್ರವಾಹ ಇದುವರೆಗೆ, ಸುಮಾರು 900 ಮಂದಿಯನ್ನ ಬಲಿ ಪಡೆದಿದೆ. ಇನ್ನೂ ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಮಿಸ್ ಆಗಿದ್ದಾರೆ ಅಂತ ಹೇಳಲಾಗ್ತಾ ಇದೆ. ಹೀಗಾಗಿ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳೂ ಅಲ್ಲಿರುತ್ವೆ. ಈ ಭೀಕರ ಫ್ಲಾಶ್​ ಪ್ಲಡ್​​ನಲ್ಲಿ ಬೋಟೆ ಕೋಶಿ ಹಾಗೂ ತ್ರಿಶೂಲಿ ನದಿ ಪಾತ್ರದ ಸಾಕಷ್ಟ ಗ್ರಾಮಗಳೇ ನಾಶಾ ಆಗಿದ್ದು ಅಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತೆ ಅಂತ ಹೇಳಲಾಗ್ತಾ ಇದೆ. ಇಂತಹ ಹೊತ್ತಲ್ಲೇ ತ್ರಿಶೂಳಿ ನದಿಯ ರಣ ಭೀಕರ ಪ್ರವಾಹದಲ್ಲಿ ಶಾಲೆಯೊಂದರ 1640ಕ್ಕೂ ಹೆಚ್ಚು ಮಕ್ಕಳು ಅಚ್ಚರಿಯ ರೂಪದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಒಂದೆರಡು ನಿಮಿಷಗಳ ಮುಂಜಾಗ್ರತೆ ಅಲ್ಲಿ ಅಷ್ಟೊಂದು ಮಕ್ಕಳ ಜೀವವನ್ನ ಉಳಿಸಿದೆ. ಹಾಗೇ, ಹೆಣ್ಣುಮಗಳು ಒಬ್ಬಾಕೆ ತನ್ನ ಜೊತೆಗಿದ್ದ ಹತ್ತಾರು ಮಂದಿಯ ಪ್ರಾಣ ಕಾಪಾಡಿದ್ದಾರೆ. ಹಾಗಾದ್ರೆ ನೇಪಾಳದ ದಾರುಣ ಘಟನೆಯ ನಡುವೆ ಕೇಳಿ ಬರ್ತಾ ಇರೋ ಹೃದಯ ಸ್ಪರ್ಷಿ ವಿದ್ಯಮಾನಗಳು ಏನು..? ಭೀಕರ ಪ್ರವಾದಿಂದಾ ಆ ಮಕ್ಕಳು ಪಾರಾಗಿದ್ದು ಹೇಗೆ ಅನ್ನೋದನ್ನ ತಿಳಿದುಕೊಳ್ಳೋಕೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
Also Read: ಬಾಬರ್ ಜನ್ಮ ಭೂಮಿಯಲ್ಲಿ ಭಾರತದ ಬಿಗ್ ಡೀಲ್: Modi’s in Uzbekistan.!
Raghavendra N
Written By

Raghavendra N

Content Writer

17 years of experience in Media and Digital Media.Expertise in Scripting, Video Production,Documentary Making and ad Films

Comments

No comments yet.