ಪಶ್ಚಿಮ ಘಟ್ಟಗಳಲ್ಲಿ ವಿಶಿಷ್ಟ ಪ್ರಾಣಿ : The Story of Nilgiri Marten.!
ಪಶ್ಚಿಮ ಘಟ್ಟಗಳು..ಈ ಮಾತು ಕೇಳ್ತಾ ಇದ್ದಂತೆ ಬಹಳಷ್ಟು ಜನ್ರಲ್ಲಿ ರೋಮಾಂಚನ.. ಹಚ್ಚ ಹಸುರಿನ ಕಾಡು.. ಮನುಷನ್ಯನ ಹಜ್ಜೆ ಗುರುತುಗಳೇ ಇಲ್ಲದ ನೆಲ.. ಪ್ರಕೃತಿಯ ಮಡಿಲಲ್ಲಿ ಸದ್ದು ಮಾಡುತ್ತಾ ಹರಿಯುವ ಜಲರಾಶಿ.. ಅದ್ಭುತ ಪರ್ವತಗಳು.. ಸುಂದರ ಕಣಿವೆಗಳು.. ಶೋಲಾ ಬೆಟ್ಟಗಳು..ನಿ ತ್ಯ ಹರಿದ್ವರ್ಣ ಕಾಡುಗಳು.. ಆ ಕಾಡುಗಳ ನಡುವೆ ಹಾದು ಹೋಗುವ ಅದ್ಭುತ ರಸ್ತೆಗಳು. ಹೀಗೆ ಪಶ್ಚಿಮ ಗಟ್ಟ ಅನ್ನೊದು ನೋಡುಗರ ಕಣ್ಣಿಗೆ ರುದ್ರರಮಣೀಯ.
ಇನ್ನು ಈ ಪಶ್ಚಿಮ ಘಟ್ಟಗಳು ಭಾರತದ ಅತ್ಯದ್ಭುತಗಳಲ್ಲಿ ಒಂದು. ಇಲ್ಲಿನ ಪ್ರಕೃತಿ ಸೌಂದರ್ಯ, ಜೀವವೈವಿಧ್ಯ ಹಾಗೂ ಜಲಸಂಪತ್ತು ಇವುಗಳ ಮಹತ್ವವನ್ನ ಇನ್ನಷ್ಟು ಹೆಚ್ಚು ಮಾಡ್ತಲೇ ಇದೆ. ಭಾರತದ ಪಶ್ಚಿಮ ಭಾಗದಲ್ಲಿ ಅರಬ್ಬಿ ಸಮುದ್ರಕ್ಕೆ ಸಮಾನಾಂತರವಾಗಿ ಸೃಷ್ಟಿಯಾಗಿರುವ ಈ ಪರ್ವತ ಶ್ರೇಣಿ, ನೋಡೋದಕ್ಕೆ ಬೆಟ್ಟಗಳ ಸಾಲಿನ ಹಾಗೆ ಕಾಣುತ್ತಾದ್ರು, ಇವು ಕೋಟ್ಯಂತರ ಜನರನ್ನ ಸಾಕಿ ಸಲಹ್ತಾ ಇವೆ. ದಕ್ಷಿಣ ಭಾರತದ ಜೀವನದಿಗಳ ಉಗಮ ಸ್ಥಾನವೇ ಈ ಪಶ್ಚಿಮ ಘಟ್ಟಗಳು. ಗೋದಾವರಿ, ಕೃಷ್ಣ, ತುಂಗಭದ್ರ, ಕಾವೇರಿ, ಶರಾವತಿ, ನೇತ್ರಾವತಿ, ಕಾಳಿ, ಭವಾನಿ, ತಮಿರಭರಣಿ, ಸೇರಿದ ಹಾಗೇ ಸಾಕಷ್ಟು ನದಿಗಳು ಇಲ್ಲಿಂದ ಜೀವ ಪಡೆಯುತ್ವೆ.ಈ ನದಿಗಳು ಇವತ್ತು ಇಡೀ ದಕ್ಷಿಣ ಭಾರತವನ್ನೇ ಸಾಕಿ ಸಲಹ್ತಾ ಇವೆ. ಈ ಘಟ್ಟಗಳ ಸಾಲು ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕದ, ತಮಿಳುನಾಡು ಹಾಗೂ ಕೇರಳಗಳಲ್ಲಿ ಹರಡಿಕೊಂಡಿವೆ. ಸುಮಾರು 1600 ಕಿಲೋಮೀಟರ್ಗಳಷ್ಟು ಉದ್ದದ ಈ ಘಟ್ಟದಲ್ಲಿ ಅತ್ಯದ್ಭುತ ಜೀವಿಗಳು, ಹಾಗೂ ಗಿಡಮರಗಳಿವೆ. ಹೀಗಾಗಿನೇ ಪಶ್ಚಿಮಘಟ್ಟ ಭಾರತದಲ್ಲಿನ ಅದ್ಭುತ ಅನ್ನಿಸೋದು.
ಇಂತಹ ಪಶ್ಚಿಮಘಟ್ಟಗಳಲ್ಲಿ ಅಸಂಖ್ಯಾತ ಜೀವಗಳಿವೆ. ಈ ಘಟ್ಟಗಳು ಹುಲಿಯ ಘರ್ಜನೆಯನ್ನ ಕೇಳಿವೆ. ಇಲ್ಲಿ ಆನೆಯ ಸದ್ದು ಮಾರ್ದನಿಸುತ್ತೆ. ಚಿರತೆಗಳು, ಬ್ಲಾಕ್ ಪ್ಯಾಂತರ್, ಗೌರ್, ಸ್ಲಾತ್ ಬೇರ್, ವೈಲ್ಡ್ ಡಾಗ್ಸ್ ಸೇರಿದ ಹಾಗೆ ಸಾಕಷ್ಟು ಜೀವಿಗಳು ಇಲ್ಲಿವೆ. ಇದ್ರ ಜೊತೆಗೆ ಜಗತ್ತಿಗೆ ಕಣ್ಣಿಗೆ ಕಡಿಮೆ ಕಾಣಿಸುವ ಜೀವಿಗಳಲ್ಲಿ ಒಂದಾದ, ಸಮಾನ್ಯವಾಗಿ ಯಾರ ಕಣ್ಣಿಗೂ ಬೀಳದ ಜೀವಿಗಳು ಅಂತಂದ್ರೆ ಅವು ನೀಲಗಿರಿ ಮಾರ್ಟನ್ಸ್ಗಳು.
Written By
Raghavendra N
Content Writer17 years of experience in Media and Digital Media.Expertise in Scripting, Video Production,Documentary Making and ad Films
Comments
No comments yet.